ಉಷಾ ಪ್ರಕಾಶನ ದಾವಣಗೆರೆ ಯಿಂದ ಮುದ್ರಿತ ವಾದ "ಸುಷುಮ್ನ ರಾವ್ ಉದ್ದವ ರಾವ್ ವ್ಯಾಸಮುದ್ರನ ಲೈಫ್ ಸಫಾರಿ" ಅಥವಾ "ಎಸ್. ಯು. ವಿ" , ಸದಾನಂದ ಹೆಗಡೆ ಯವರ ಕಿರು ಕಾದಂಬರಿ. ಅಲ್ಲಲ್ಲಿ ಓದಿದರಾಯಿತು ಎಂದು ಕೈಗೆತ್ತಿ ಕೊಂಡ ಪುಸ್ತಕವೊಂದು ಆಲಸ್ಯ, ನಿದ್ದೆ, ಒತ್ತಡ ಗಳ ನಡು ನಡುವೆ ತಿಂಗಳ ಓದಿಗೆ ಸಾಕಾಗುವ ಸರಕಾಯಿತು. ವ್ಯಕ್ತಿಯೊಬ್ಬ ಕಾರನ್ನು ಕೊಳ್ಳುತ್ತಾನೆ ಅಥವಾ ಬದಲಾಯಿಸುತ್ತಾನೆ ಎಂದರೆ ಅದೊಂದು ಸಣ್ಣ ಸ್ತಿತ್ಯಂತರ ಅದೊಂದು ಸಾಮಾಜಿಕ ಚಲನೆ ಎಂದೇ ಸುರುವಾಗುವ ಕಥೆ, ಅತಿಶಯೋಕ್ತಿಯ ಬಾಲ ಬೆಳೆಯುವ ವಿವರ ಗಳ ಗುಡ್ಡೆ ಎನ್ನುವ ಉಪೇಕ್ಷೆ ಮೊದಲೆರಡು ಪುಟ ಗಳನ್ನು ಓದುವಾಗ ಇತ್ತು.

ಆದರೆ, ಚಿಟ್ಟೆಯ ರೂಪಾಂತರ ದಂತೆ (metamorphosis) ಹಂತ ಹಂತ ವಾಗಿ ಬೆಳೆಯುವ ಕಾರಿನ ಕಥೆ - ಸವಾರಿ, ಪ್ರವಾಸ ಅಥವಾ ಮೋಜಿನ ವಿವರಣೆ ಯಾಗದೆ, ಕೈಗೆಟಕದ್ದು ಕೈಗೆ ಬಂದಾಗ ಆಗುವ ಮನುಷ್ಯ ಸಹಜ ನಡೆ - ನಡುವಳಿಕೆ ಮತ್ತು ಅನುಭವ ಗಳದ್ದು ಎಂದು ಅನ್ನಿಸಿ ಒಂದು ಅಪರೂಪದ ಓದಿಗೆ ಸಾಕ್ಷಿ ಆಯಿತು.

ಕರಾವಳಿಯ ಸೆರಗು ಮಂಗಳೂರಿನ ಸುತ್ತ ಮುತ್ತಲಿನ ಬದುಕು - ಯಕ್ಷಗಾನ, ಕೋಲ , ಕರಾವಳಿಯ ಸೆರಗಿನಲ್ಲಿಯೇ ಬಚ್ಚಿಟ್ಟು ಕೊಂಡಿರುವ ನದಿ ಬೆಟ್ಟ ಗಳು, ತುಳು ಭಾಷೆ ಇತ್ಯಾದಿ ಗಳಿಂದ, ಇಣುಕುವ ಮುಂಗುಸಿ ಗಳ ವರೆಗೆ 360* ಚಿತ್ರಣ ಕೊಡುವ ಈ ಕಥನ ಕಥಾ ವಸ್ತು ವಿನ ದೃಷ್ಠಿ ಯಿಂದ ತುಂಬಾ ವಿಚಿತ್ರ ವಾದದ್ದು. ಮಧ್ಯಮ ವರ್ಗ ದವರ ಆಜೀವ ಕನಸಾದ ಉದ್ಯೋಗ, ಕಾರು, ಮನೆ ಮತ್ತು ಸಂಸಾರದ ಸುತ್ತ ಸುತ್ತಿ ಕಲ್ಲು ಸಕ್ಕರೆ ಯ ಹಿತ ವನ್ನು ಕೊಡುವಂತಹದ್ದು. ಹೆಗಡೆ ಯವರಿಗೆ ಇನ್ನಷ್ಟು ಪುರುಸೊತ್ತಿನ ನಿರೂಪಣೆ ಸಾಧ್ಯವಿದ್ದಿದ್ದರೆ, ಅತ್ಯಾಪ್ತ ವೆನ್ನಿಸುವ ಓದಿಗೆ ಆಗ ಬಹುದಾದ ಕಾದಂಬರಿ ಯಾಗುತ್ತಿತ್ತು.

ಉತ್ತರ ಕರ್ನಾಟಕ ದವನಾದ ಹುಡುಗ ವ್ಯಾಸಮುದ್ರ ಮಂಗಳೂರಿನ ಎಂ ಆರ್ ಪಿ ಎಲ್ ಸಂಸ್ಥೆ ಯಲ್ಲಿ ಕೆಲಸ ಗಿಟ್ಟಿಸಿ ಕೊಂಡು ಸಂಪಾದನೆ ಮಾಡುವುದು. ಅವನಿಗೆ ಕಾರು ಕೊಳ್ಳುವ ಆಸೆ ಜಾಗೃತ ವಾಗುವುದು, ಹಳೆಯ ಮಾರುತಿ 800 ಕಾರನ್ನು ಸೆಲ್ ಮಾಡಿ ಹೊಸ ಟಾಟಾ ಸಫಾರಿ ಕಾರ್ ಅನ್ನು ಕೊಂಡು ಓಡಿಸುವುದು. ಮಂಗಳೂರಿನವಳೇ ಆದ ಮನೋರಮೆಯನ್ನು ಪ್ರೇಮಿಸಿ ಮದುವೆ ಆಗುವುದು. ಇವೆಲ್ಲ ಕಥೆಯ ಅಸಲು ವಿವರ ಗಳಾದರೆ, ಕಥೆ ಬಿಚ್ಚಿ ಕೊಳ್ಳುವ ಸನ್ನಿವೇಶ ಗಳು ಸನ್ಯಾಸಿ ಬೆಕ್ಕು ಸಾಕಿದ ಕಥೆಯಂತೆ : ಇಲಿಯನ್ನು ಹಿಡಿಯಲು ಬೆಕ್ಕು ಸಾಕಿದ, ಬೆಕ್ಕಿಗೆ ಹಾಲು ಕುಡಿಸಲು ಹಸು ಸಾಕಿದ, ಹಸುವನ್ನು ನೋಡಿಕೊಳ್ಳಲು ಒಂದು ಹೆಂಗಸನ್ನೂ ಸಾಕ ಬೇಕಾಯಿತು.

ಸಂಸಾರದ ಖರ್ಚು ವೆಚ್ಚ ಗಳನ್ನು ಹೊಂದಿಸಿ ಸಾಲ ಮಾಡಿ ಇಎಂಐ ಮೇಲೆ ಕಾರು ಬಂತು. ಕಿಷ್ಕಿಂದೆ ಯಂಥಹ ಬೀದಿಯಲ್ಲಿ ಸಿಕ್ಕಿ ಕೊಂಡ ಮನೆ ಯನ್ನು ಖರೀದಿ ಮಾಡಿ ಕಾರಿನ ಪಾರ್ಕಿಂಗ್ ಸಮಸ್ಯೆ ಯನ್ನು ಮೈಮೇಲೆ ಎಳೆದು ಕೊಂಡಾಯಿತು. ಕಾರನ್ನು ಓಡಿಸುವಾಗ ಇರುವ ಹಮ್ಮು ಸಂಜೆ ಮನೆಗೆ ಬಂದಾಗ ದೂರದಲ್ಲೆಲ್ಲೋ ಪಾರ್ಕ್ ಮಾಡಿ ಬರಬೇಕಾದಾಗ ನೋವಾಗಿ ಕಾಡಿತು.

ಮೇನ್ ಗೋಟ್ ಸೀಟ್ ಕವರಿನ ವಾಸನೆಯಿಂದ ಎಮ್ಮೆ ಸಗಣಿ ಮೆತ್ತಿದ ಬಂಪರ್ ಗಳನ್ನು ತೊಳೆಯುವ ವರೆಗೆ ಕಾರಿನ ವಾಗತಿ ಜೀವನದ ಗತಿ ಯನ್ನೇ ಬದಲಿಸಿತು. ಸಂಸಾರ ಸಾರ ದೊಡನೆ ಪ್ರವಾಸ, ಕಳುವು ಅಯ್ಯೋ ಕಥೆಗೆ ಎಷ್ಟೊಂದು ಕಾಲು ಗಳು.

ಇದೆಲ್ಲ ಮುಗಿದು ಅದೆಲ್ಲಿಂದಲೋ ಬರುವ ವರದೇ ಕಾಮರೂಪಿಣಿ ವ್ಯಾಸಮುದ್ರನ ತಂಗಿ. ಅವಳ ಕೆಥೆಯೇ ರೋಚಕ. ಅವಳ ಬದುಕೂ ಕಾರೋಡಿಸುವ ಎರಡನೇ ಗಂಡನೊಡನೆ ಎನ್ನುವ ಕಥಾ ತಂತ್ರ ಸದಾನಂದ ಹೆಗಡೆ ಯವರ ಪ್ರತಿಭೆಗೆ ಕನ್ನಡಿ.

ಸಮತಲ ದಲ್ಲಿಯೇ ಓಡುತ್ತೇನೆ ಎನ್ನುವ ಬಿಮ್ಮು ಬಹುಶ: ಯಾವ ಕಾರಿಗೂ ಇಲ್ಲ. ಜೀವನದ ಏರಿಳಿತ ಗಳನ್ನ ಅಪಘಾತ ಗಳನ್ನ ಮೆಟ್ಟಿ ಬಂದ ವರದೇ ಕಾಮರೂಪಿಣಿಯ ಸ್ವಾಭಿಮಾನ ವನ್ನು ಗುರುತಿಸಿ ಮತ್ತೆ ತಮ್ಮ ಮನೆಯ ಒಡಲಲ್ಲಿ ಸೇರಿಸಿಕೊಳ್ಳುವ ಅಣ್ಣ ವ್ಯಾಸಮುದ್ರ ಮುಂದೊಂದು ದಿನ ಆಡಿ ಕಾರನ್ನು ಓಡಿಸುವಂತಾಗಲಿ.